ಯಶೋಃಗೀತ

ebook

By ಯಶಸ್‌ ರಮೇಶ್

cover image of ಯಶೋಃಗೀತ

Sign up to save your library

With an OverDrive account, you can save your favorite libraries for at-a-glance information about availability. Find out more about OverDrive accounts.

   Not today
Libby_app_icon.svg

Find this title in Libby, the library reading app by OverDrive.

app-store-button-en.svg play-store-badge-en.svg
LibbyDevices.png

Search for a digital library with this title

Title found at these libraries:

Loading...

About the book:
ಪ್ರಸ್ತುತ ಪುಸ್ತಕವು ಲೇಖಕರ ಆರನೇ ರಚನೆಯಾಗಿದ್ದು, ಈ ಪುಸ್ತಕದಲ್ಲಿ ಲೇಖಕರು ಬರೆದ ಎಲ್ಲಾ ಕವಿತೆಗಳ ಸಂಗ್ರಹವಿದೆ. ಇವುಗಳ ಜೊತೆಗೆ ಕೆಲವು ಸಾಮಾನ್ಯ ಒಗಟುಗಳು ಕೂಡ ಇವೆ. ಕೆಲವು ಕವಿತೆಗಳು ಏಕಾಂತ ದುಃಖ, ದೇಶಾಭಿಮಾನ, ಸಾಮಾಜಿಕ ಧೋರಣೆ, ನೈಜತೆ ಅಂಶಗಳನ್ನೊಳಗೊಂಡರೆ ಮತ್ತಷ್ಟು ಕವಿತೆಗಳು ಒಮ್ಮೆ ಮೂಡಿ ಕ್ಷಣಕಾಲದಲ್ಲಿ ಮಾಸಿಹೋದ ಪ್ರೀತಿಯ ಬಗ್ಗೆ ಕೂಡ ಒಂದು ವಿಭಿನ್ನ ಚಿತ್ರಣ ನೀಡಿದೆ. ಲೇಖಕರು ಸಾಮಾನ್ಯವಾಗಿ ಸಂಶೋಧನಾ ಮತ್ತು ಕಾಲ್ಪನಿಕ (Fictional) ಪುಸ್ತಕಗಳು ಬರೆದು ಜನಪ್ರಿಯರಾಗಿದ್ದಾರೆ. ಪ್ರಸ್ತುತ ಪುಸ್ತಕವು ಅವರ ಮೊದಲನೇ ಕವನ ಸಂಕಲನ ಪುಸ್ತಕವಾಗಿರುತ್ತದೆ.

-"ನನ್ನ ಆತ್ಮೀಯ ಗೆಳತಿ ಐಶ್ವರ್ಯಾ (ದುರ್ಗಾಶ್ರೀ) ರವರಿಗೆ ಸಮರ್ಪಿಸುತ್ತೇನೆ. ನಮ್ಮ ಸ್ನೇಹವು ಹೀಗೆ ಶಾಶ್ವತವಾಗಿರಲೆಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ" ಯಶಸ್‌ ರಮೇಶ್
About the author:
ಶ್ರೀಯುತ ಯಶಸ್‌ ರಮೇಶ್ ರವರು ದಿನಾಂಕ ಏಪ್ರಿಲ್‌ 03,2002ರಂದು ಮೈಸೂರು ನಗರದಲ್ಲಿ ಶ್ರೀಮತಿ ಸಂಧ್ಯಾ ಹಾಗೂ ಶ್ರೀ ರಮೇಶ್‌ರವರ ದಂಪತಿಗಳಿಗೆ ಜನಿಸಿರುತ್ತಾರೆ. ಇವರು ಸಾಹಿತ್ಯ ಲೋಕದಲ್ಲಿ ಮೇ 2021ರಿಂದ ಐದು ಕೃತಿಗಳನ್ನು ಬರೆಯುವ ಮೂಲಕ ತನ್ನ ಬರವಣಿಗೆ ಕೌಶಲಗಳನ್ನು ಪ್ರಸ್ತುತ ಪಡಿಸಿದ್ದಾರೆ. ಪ್ರಸ್ತುತ ಸಮಯದಲ್ಲಿ ಯಶಸ್‌ರವರು ತಮ್ಮ ಬಿ.ಕಾಂ ಪದವಿಯನ್ನು ಮೈಸೂರಿನ ವಿಜಯನಗರದ ದೇವಲ ಮಹರ್ಷಿ ಟ್ರಿನಿಟಿ ಪದವಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಾ, ಇಂಜಿನಿಯರಿಂಗ್‌ ಪದವಿಯನ್ನು ನಗರದ ಹೊರ ವರ್ತುಲದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಸಮನಾಗಿ ವ್ಯಾಸಾಂಗ ಮಾಡುತ್ತಿದ್ದಾರೆ.
ಇವರಿಗೆ ದಿನಾಂಕ 06.03.2021ರಂದು ಟ್ರಿನಿಟಿ ಪದವಿ ಕಾಲೇಜು ಆಡಳಿತವು ʼಯಂಗ್‌ ಮೈಂಡ್‌ʼ (ಯುವ ಜ್ಞಾನಿ) ಎಂಬ ಬಿರುದನ್ನು ಪ್ರಧಾನಿಸಿದೆ. ದಿನಾಂಕ 01.08.2021ರಂದು ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ಎರಡು ಖಾಸಗಿ ಉದ್ದಿಮೆಗಳು ಇವರ ಸಾಹಿತ್ಯ ಹಾಗೂ ಇತರೆ ಪರಿಶ್ರಮ ಪರಿಗಣಿಸಿ "Indian Noble Awards" ಹಾಗೂ "Golden Arc Awards"ನಲ್ಲಿ ಟಾಪ್‌ 50 ಪ್ರಶಸ್ತಿ ವಿಜೇತರಲ್ಲಿ ಇವರನ್ನು 15ನೇ ಸ್ಥಾನದಲ್ಲಿ ಗೌರವ ಸೂಚಿಸುವ ಪುರಸ್ಕಾರ ನೀಡಲಾಗಿದೆ. ಅದರೊಂದಿಗೆ ಇವರ ʼThe Love Researchʼ ಕಾದಂಬರಿಗೆ ʼಸಾಹಿತ್ಯ ರತ್ನʼ ಬಿರುದು ಹಾಗೂ ʼರಬೀಂದ್ರನಾಥ್‌ ಟ್ಯಾಗೋರ್‌ ಸಾಹಿತ್ಯ ಮತ್ತು ಕಲೆʼ ಪ್ರಶಸ್ತಿಗಳನ್ನು ಎಲೈಟ್‌ ಬುಕ್‌ ಅವಾರ್ಡ್ಸ್‌ ಎಂಬ ಸಂಸ್ಥೆಯಿಂದ ಲಭಿಸಿದೆ.
ಇವರಿಗೆ ಕಾದಂಬರಿ ಓದುವ ಹಾಗೂ ಬರೆಯುವ ಹವ್ಯಾಸದೊಂದಿಗೆ, ತಮ್ಮ ಕೀಬೋರ್ಡ್‌ನಲ್ಲಿ ಹೊಸ ರೀತಿಯ ಸಂಗೀತದ ರಚನೆ, ಸೈಕ್ಲಿಂಗ್‌, ವೈಜ್ಞಾನಿಕ ಚಲನಚಿತ್ರಗಳ ವೀಕ್ಷಣೆ (Scince-Fiction) ಬೇರೆ ಭಾಷೆಗಳ ಕಲಿಯುವಿಕೆ ಮತ್ತು ಅಡುಗೆಯ ಹವ್ಯಾಸಗಳನ್ನು ತಮ್ಮ ಚಿಕ್ಕ ವಯಸ್ಸಿನಿಂದಲೇ ಬೆಳೆಸಿಕೊಂಡಿದ್ದಾರೆ.

ಯಶೋಃಗೀತ